Monday, February 22, 2010

ಸ್ವಾವಲಂಬನೆಯತ್ತ ಹೆಜ್ಜೆ

ಸ್ವಾವಲಂಬನೆಯತ್ತ ಹೆಜ್ಜೆ

ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ
ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ

ಗೊತ್ತಿತ್ತು ಎಲ್ಲರಿಗೂ ಈ ಲಾಟರಿ ಮೋಸದ ಬಲೆ ಎಂದು
ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡುವೆ ಎಂದು?

ಹೇಳಿದ ಆತ ಎಲ್ಲರಿಗೂ ನಿರೀಕ್ಷಿತ ಉತ್ತರವನ್ನು
ಬಿಡುವೆ ಈ ವೃತ್ತಿಯನ್ನು, ಘೋಷಿಸಿ ನಿವೃತ್ತಿಯನ್ನು

ಅಬ್ಬಾ!! ಕಂಡೆ ನಾ ಜನಗಳ ಬಹು ಮುಖ್ಯ ಗುರಿಯನ್ನು
ಆದಷ್ಟು ಬೇಗ ಜೀವನದಲ್ಲಿ ನೆಲೆಯೂರುವ ತುಡಿತವನ್ನು

ಗುರಿ ಗೊತ್ತಾಗಿಯೂ ನಾವ್ ಮಾಡುತ್ತಿರುವ ಕೆಲಸವೇನು?
ಉಧ್ಯೋಗ ಹಿಡಿದು ಬರುವ ಸಂಬಳಕ್ಕೆ ಕಾಯುವುದೇ ಏನು?

ನೋಡಿದೆ ನನ್ನ ಜೀವಮಾನದ ಒಟ್ಟು ಆದಾಯವನ್ನು ಗುಣಿಸಿ
ಸಿಗುವುದಿಷ್ಟೇನಾ ಜೀವನವೆಲ್ಲಾ ದುಡಿದರೂ ದೇಹವನ್ನು ಧಣಿಸಿ?

ಕಾಯುತ್ತ ಕೂತವರು ಗಳಿಸಿದ್ದಾರೆಯೇ ಗುರಿಯಲ್ಲಿ ಯಶಸ್ಸು?
ಸಾಧ್ಯವಾಗುವುದು ಗುರಿ, ಮಾಡಿದರೆ ಸ್ವಂತ ಪ್ರಯತ್ನದ ಮನಸ್ಸು

ಗುರಿ ಮುಟ್ಟುವ ತವಕದಲಿ ಹಾಕಲಿ ಜನಗಳು ಶ್ರಮ
ಮುನ್ನುಗ್ಗಿ ಶ್ರಮಿಸುವುದೇ, ಕಾಯುವುದಕ್ಕಿಂತ ಉತ್ತಮ.

ಗುರಿಯಲ್ಲಿ ಸಾಧಿಸಲಿ ಯಶಸ್ಸು ನಮ್ಮ ಪ್ರೀತಿಯ ಜನ
ಆಗಲೇ ನೆಲೆಯೂರಲು ಆಗುವುದು ನಮ್ಮೆಲ್ಲರ ಜೀವನ.

- ತೇಜಸ್ವಿ. ಎ. ಸಿ

No comments:

Post a Comment