Friday, April 9, 2010

ಯಾರಿವನು ಸಿಂಹ

ಯಾರಿವನು ಸಿಂಹ

ನೆನೆಪಿದೆ ನನಗೆ ಆ ನಸುಗೆಂಪು ಸಂಜೆ
ಅಂದು ಇತ್ತು ನನಗೆ ಭಾನುವಾರದ ರಜೆ

ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ
ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ

ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ
ಅವನನ್ನು ಹೊತ್ತು ತರಲು ಪೆಟ್ಟಿಗೆಯಲ್ಲಿ ಮಾಡಿದ್ದೆ ರಂದ್ರ

ಆ ಪುಟ್ಟ ಶ್ವಾನಕೆ ಅವರು ಹಾಕಿದ್ದರು ಆನೆಯ ಸರಪಳಿ
ಆ ಕುನ್ನಿಯು ಬಂದಿತು ಮನೆಗೆ ಆಗಿ ಪುಟ್ಟ ಬಳುವಳಿ

ಪುಟ್ಟ ಕುನ್ನಿಯ ತುಂಟಾಟ ಅಂದು ಗಳಿಸಿತ್ತು ಎಲ್ಲರ ಪ್ರೀತಿ
ಅವನು ಮಾಡುತ್ತಿದ್ದ ನಾಯಿಗಳ ಬೇಟೆ ಪಡೆದಿತ್ತು ಮನೆಯಲ್ಲಿ ಖ್ಯಾತಿ

ಶಾಲೆಗೆ ಹೋಗುವ ಮಕ್ಕಳನ್ನು ಹೆದರಿಸುತ್ತಿದ್ದ ಬೊಗಳಿ
ಕುಣಿದು ಬೊಗಳಿ ಕೆಸರು ಮಾಡುತ್ತಿದ್ದ ನಮ್ಮ ಮನೆಯ ಜಗುಲಿ

ವಾಕಿಂಗ್ ಎಂದು ಹೋಗುವಾಗ ಮುಖದಲ್ಲಿರಿತ್ತಿತ್ತು ಸಿಂಹದ ಠೀವಿ
ರಸ್ತೆಯ ಹಂದಿ, ನಾಯಿಗಳಿಗೆ ಸದಾ ಆಗಿರುತ್ತಿದ್ದ ಬೇಟೆಯ ಕೋವಿ

ನಮ್ಮ ಮನೆಯ 'ನಂದು'ವನ್ನು ಸಾಕಿದ್ದೇವೆ ಸಿಂಹದ ಧಾಟಿ
ಎಂದೂ ಕಳ್ಳರನ್ನು ಬಿಡಲಿಲ್ಲ ಅದು ಹೋಗಲು ತನ್ನನು ದಾಟಿ

- ತೇಜಸ್ವಿ .ಎ.ಸಿ

No comments:

Post a Comment