Sunday, January 16, 2011

ಸ್ವ-ವಿಮರ್ಶೆ

ಸ್ವ-ವಿಮರ್ಶೆ

ಹಲವು ಕಾರ್ಯಗಳ ಸಾಧಿಸದೆ ವಿಧಿಯಿಲ್ಲ
ಮಹತ್ವದ ಕಾರ್ಯಗಳಲಿ ಗೆಲ್ಲದೆ ಬದುಕಿಲ್ಲ

ಪ್ರಮುಖ ಕೆಲಸಗಳೂ ತೋರುವುದು ಸೋಲು
ನಮ್ಮೆಲ್ಲ ಶ್ರಮಗಳ ಅವು ಮಾಡುವವು ಪೋಲು

ಒಮ್ಮೆ ಸೋತರೆ ಆಗುವುದು ಚಿಕ್ಕ ಪರಿಣಾಮ
ಪುನರಾವರ್ತಿತ ತಪ್ಪು ಬೀರುವುದು ದುಷ್ಪರಿಣಾಮ

ಅದಕ್ಕೆ ನಾವು ಆರಂಭಿಸಬೇಕು ಹೊಸ ಪ್ರಕ್ರಿಯೆಯ
ಅಪಜಯವ ವಿಮರ್ಶಿಸುವ ಉತ್ತಮ ಪದ್ದತಿಯ

ಮಾಡಿದರೆ ವಸ್ತುನಿಷ್ಠ, ಕ್ರಮಬದ್ದ ವಿಮರ್ಶೆಯ
ತಿಳಿವುದು ಸೋಲಿಗೆ ಕಾರಣವಾದ ಅಂಶಗಳ

ಇದರಿಂದ ತಿಳಿವುದು ಕಾರ್ಯದಲಿ ಆದ ತಪ್ಪುಗಳು
ಹಾಗೆಯೇ ಅವ ಸರಿಪಡಿಸಲು ಬೇಕಾದ ದಾರಿಗಳು

ರೂಪಿಸೋಣ ಎಲ್ಲಾ ಸರಿಪಡಿಸಲು ಕಾರ್ಯಕ್ರಮಗಳ
ಕಾರ್ಯಶೀಲನರಾಗಿ ಚುರುಕಾಗಿ ಮಾಡೋಣ ಕೆಲಸಗಳ

- ತೇಜಸ್ವಿ ಎ ಸಿ

2 comments:

  1. company alli arambhavaagiruva self assessment kuritu baradante anista ide :) chenagide..

    nanna blogigomme banni

    ReplyDelete
  2. ವಾಣಿಶ್ರೀ,ವಾಸ್ತವದಲ್ಲಿ ಇದಕ್ಕೆ ಕಚೇರಿಯಲ್ಲಿ ಇರುವ ರೂಟ್ ಕಾಸ್ ಅನಲಿಸಿಸ್ ಸ್ವಲ್ಪ ಪ್ರೇರಣೆ ಆಯಿತು. ಏಕೆಂದರೆ ಅವರು ಮಾಡಿದ ಹಾಗೆ ನಾವು ನಮ್ಮ ವೈಯಕ್ತಿಕ ಕೆಲಸಗಳ ರೂಟ್ ಕಾಸ್ ಅನಲಿಸಿಸ್ ಮಾಡಿದ್ರೆ ನಮಗೂ ಒಳ್ಳೇದು ಅಂತ. ವಾಣಿಶ್ರೀ ನಿಮ್ಮ ಬ್ಲಾಗಿಗೆ ಖಂಡಿತ ಭೇಟಿ ಕೊಡ್ತೀನಿ.

    ReplyDelete