Sunday, February 13, 2011

ಸುಪ್ರಭಾತ

  ಸುಪ್ರಭಾತ

 ಸಣ್ಣಗಿನ ಚುಮು ಚುಮು ಚಳಿಯಲಿ
 ಸಾಲು ಸಾಲಿನ ಹಕ್ಕಿಗಳ ಚಿಲಿಪಿಲಿ,
 ಸಣ್ಣನೆ ಬೆಳಕಿನ ಬಾನಿಗೆ ಸುಂದರ
 ಬಾನಾಡಿಗಳ ತೋರಣದ ಸಿಂಗಾರ

 ಸುತ್ತಣವು ತಿಳಿ ಮಂಜು ಮುಸುಕಿರಲು
 ಭುವಿಯ ಮೇಲೆಲ್ಲಾ ಇಬ್ಬನಿಯ ಹಾಸು
 ಪ್ರಾತಃಕಾಲದ ತಂಪಾದ ತಂಗಾಳಿಯಲಿ
 ಹಕ್ಕಿಗಳ ಕಲರವ ಊರಿಗೆಲ್ಲ ಸುಪ್ರಭಾತ

 ತೆಂಗಿನಗರಿಗಳ ನಡುವೆ ಮಿಂಚುವ ಎಳೆ
 ನೇಸರನ ಕಿರಣಗಳು, ಬೆಚ್ಚನೆಯ ಹಿತವ
 ನೀಯುತ, ಉಲ್ಲಾಸಭರಿತ ನವ ದಿನದ
 ಆರಂಭವ ಸೂಚಿಸಿ ಶುಭವ ಕೋರಿತು

 ಪ್ರಭೆಯ ಸೂಸುತ ಪ್ರಭಾಕರನುದಯಿಸಿ
 ತನ್ನೆಳೆಯ ಕಿರಣಗಳ ಮುಚ್ಚಿದ ನಯನಕೆ
 ತಾಕಿಸಿ, ಶಯನದಲ್ಲಿದ್ದ ಜೀವಿಗಳನ್ನೆಲ್ಲ
 ಎಬ್ಬಿಸುತ ಧರೆಗೆಳಿದನೋ ಸೂರ್ಯರಶ್ಮಿ.

 - ತೇಜಸ್ವಿ .ಎ.ಸಿ

1 comment:

  1. ತೆಂಗಿನಗರಿಗಳ ನಡುವೆ ಮಿಂಚುವ ಎಳೆ ,,
    ಕವನದಲ್ಲಿರುವ ಪದ ಬಳಕೆ ಬಹಳ ಅಚ್ಚುಕಟ್ಟಾಗಿದೆ....

    ReplyDelete