ನಾ ಭಾರತೀಯ
ಮನದೊಳು ಪ್ರಾಂತೀಯತೆಯ ಧ್ವಜ ನೆಟ್ಟಿ
ನಮ್ಮ ಭಾಷಿಗರೆಂಬ ಸ್ವಂತ ಕೋಟೆಯ ಕಟ್ಟಿಕೈಯಲ್ಲಿ ಮಾತ್ರ ತ್ರಿವರ್ಣವ ಹಿಡಿದಿಹ ಭಾರತೀಯ
ರಾಷ್ಟ್ರೀಯ ಭಾವೈಕ್ಯತೆಯ ಹುಡುಕ ಹೊರಟು ಸಿಕ್ಕಾರು
ನಾಡಿನಲ್ಲಿ, ಪರರ ಸಂಸ್ಕಾರಕೆ ಗೌರವವನಿತ್ತು
ಭಾರತದ ಗಣತಂತ್ರತೆಯ ಬೆಸುಗೆಯ ಬೆಸೆದು
ಎದೆ ತಟ್ಟಿ ನಾವ್ ಹೇಳೋಣ ನಾ ಭಾರತೀಯಭಾರತದ ಗಣತಂತ್ರತೆಯ ಬೆಸುಗೆಯ ಬೆಸೆದು
ನಮ್ಮ ದೇಶಿಗರ ಎಲ್ಲಾ ಸಾಧನೆಗೆ ಹೆಮ್ಮೆ ಪಟ್ಟು
ದೇಶದ ಭವಿಷ್ಯ ಜೀವನದ ಮೇಲೆ ಕಣ್ಣಿಟ್ಟು
ನಾವೆಲ್ಲ ಎದೆ ತಟ್ಟಿ ಹೇಳೋಣ ನಾ ಭಾರತೀಯ.
- ತೇಜಸ್ವಿ. ಎ. ಸಿ
No comments:
Post a Comment