Wednesday, July 8, 2026

ಆರ್ಥಿಕ ಇಕ್ಕಟ್ಟು ಮತ್ತು ನಿರ್ವಹಣೆ

 ಆರ್ಥಿಕ ಇಕ್ಕಟ್ಟು ಮತ್ತು ನಿರ್ವಹಣೆ




ಹಣದ ಕೊರತೆ ಸಾಮಾನ್ಯವಾಗಿ ಎಲ್ಲರಿಗೂ ಜೀವನದ ಒಂದಲ್ಲ ಒಂದು ಹಂತದಲ್ಲಿ ಕಾಡಿರುತ್ತದೆ. ಎಷ್ಟೋ ಕೆಲಸಗಳಿಗೆ, ಹೊಸ ವಸ್ತುಗಳನ್ನು ಕೊಳ್ಳಲು, ಇರುವ ಮನೆಯ ಪರಿಕರಗಳನ್ನು ದುರಸ್ತಿ ಮಾಡಿಸಲು, ಅಗತ್ಯ ಸೇವೆಗಳನ್ನು ಪಡೆಯಲು, ಆರೋಗ್ಯದ ಚಿಕಿತ್ಸೆಗೂ ಸಹ ಒಮ್ಮೊಮ್ಮೆ ಯೋಚಿಸುವ ಸಂದರ್ಭಗಳು ಜನರು ಎದುರಿಸುತ್ತಾರೆ. ಅದಕ್ಕೆ ಇನ್ನು ಹೆಚ್ಚಿನ ಉಳಿತಾಯವಿದ್ದಿದ್ದರೆ ನಮ್ಮ ಕೆಲಸಗಳು ಆಗಿರುತ್ತಿದ್ದವು, ಇನ್ನೂ ಹೆಚ್ಚಿನ ಆದಾಯ ಬೇಕು ಈ ಆದಾಯ ಎಷ್ಟೋ ಕೆಲಸಗಳಿಗೆ  ಸಾಲುತ್ತಿಲ್ಲ ಎಂದು ಯೋಚಿಸುತ್ತಾರೆ.