ರಾಜಕೀಯ

on Friday, November 26, 2010

ರಾಜಕೀಯ


ಮತ್ತೆ ಮತ್ತೆ ಕೇಳಬರುತ್ತಿದೆ ಗುಸು ಗುಸು ಸುದ್ದಿ
ನಡವಳಿಕೆಯೂ ತೋರುತ್ತಿದೆ ಪಕ್ಷಪಾತದ ಬುದ್ದಿ

ನನಗೂ ಬಡೆಯಿತು ಹೊಲಸು ರಾಜಕೀಯದ ವಾಸನೆ
ಆಗಲೇ ಗೊತ್ತಾಯಿತು ರಾಜಕೀಯ ತೀರ ದುರ್ವಾಸನೆ

ಸತ್ಯದ ಖಚಿತತೆಗೆ ಗಮನಿಸಿದೆ ಸ್ವಲ್ಪ ದಿನಗಳು ಹೀಗೆ
ಪರೀಕ್ಷಿಸಿಯೂ ನೋಡಿದೆ ಸುದ್ದಿಯು ನಿಜವೋ ಹೇಗೆ

ಪಕ್ಷಪಾತತೆ ಎದ್ದು ಕಾಣತೊಡಗಿತು ಬರಿಗಣ್ಣಿನ ಮುಂದೆ
ತೆರೆಯೆ ಇಲ್ಲದೆ ನಡೆಯುತ್ತಿತ್ತು ನಾಟಕವು ನಮ್ಮ ಮುಂದೆ

ಹತೋಟಿ ಇಲ್ಲದೆ ನಡೆಯುತ್ತಿದೆ ಕಳಪೆ ರಾಜಕೀಯ
ನಮ್ಮ ನೆಲದಲ್ಲೇ ಇಂದು ನಾವಾಗಿದ್ದೇವೆ ಪರಕೀಯ

ಇಂಥಹ ವಾತಾವರಣ ನೀಡುವುದು ಅರೆ ಕ್ಷಣ ನಿರುತ್ಸಾಹ
ಮುಂದಿನ ಕ್ಷಣವೇ ನೀಡುವುದು ಮುಂಬರಲು ಪ್ರೋತ್ಸಾಹ

ತಲೆ ಓಡಿಸಿ ಮುಂಬರಲು ನೀಡುತ್ತಿರುವ ಸೂಚನೆಯೇನೋ
ಇಂತಹ ಸಂಧರ್ಭಗಳು ಬರುವುದು ನಮ್ಮ ಒಳಿತಿಗೇನೋ?

- ತೇಜಸ್ವಿ .ಎ.ಸಿ