ಹ್ಯಾಪಿ ಬರ್ತಡೆ

on Thursday, April 29, 2010

ಹ್ಯಾಪಿ ಬರ್ತಡೆ

ಚಿಂಟು ಕೇಳಿದ ಕೇಕು
ನನಗೆ ಬೇಕೇ ಬೇಕು

ಮಾಡೋಣ ನಿನ್ನ ಬರ್ತಡೆ
ಮುಂದಿನ ತಿಂಗಳು ಬರ್ತದೆ

ತರೋಣ ದೊಡ್ಡ ಕೇಕು
ಈಗ ಮಿಠಾಯಿ ಸಾಕು

ಇವತ್ತೇ ಬರ್ತಡೆ ಯಾಕಿಲ್ಲ
ಈಗಲೇ ಕೇಕು ಬೇಕಲ್ಲ

ಚಿಂಟುವಿನ ಹಠ ನಿಲ್ಲಲಿಲ್ಲ
ಕೊನೆಗೂ ಕೇಕು ಸಿಕ್ಕಿತಲ್ಲ

ಚಿಂಟು ಕುಣಿದು ಕೇಕು ತಿಂದ
ದಿನಾ ಬರ್ತಡೆ ಬರಲಿ ಎಂದ

- ತೇಜಸ್ವಿ. ಎ.ಸಿ

ಮೋಜಿನ ಬೇಸಿಗೆ ರಜೆ

on Thursday, April 22, 2010

ಮೋಜಿನ ಬೇಸಿಗೆ ರಜೆ


ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ
ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ

ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ
ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ

ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರಿಕೆಟ್ಟು
ಆಟವೆಂದರೆ ಓಡುವರಿವರು ಊಟ ತಿಂಡಿ ಬಿಟ್ಟು

ಊರಿನ ಕೆರೆ, ಕೊಳದಲ್ಲಿ ಮಕ್ಕಳಾಡುವರು ಈಜು
ರಜೆಯಲ್ಲಿ ಯಾರು ತಡೆಯರು ಇವರುಗಳ ಮೋಜು

ರಜೆಯಲ್ಲಿ ಓಡುವರು ತಾತ ಅಜ್ಜಿಗಳ ಊರಿಗೆ
ತಡೆ ಹಾಕಲಾದೀತೇ ಇವರುಗಳ ಓಟದ ದಾರಿಗೆ

ಮಳೆ ಬಂದರೆ ಮನೆಯಲ್ಲಿ ನಿಲ್ಲುವರೇ ಇವರು
ಅದರಲ್ಲೂ ಸೇರಿ ನೆನೆವ ಹೊಸ ಆಟ ಆಡುವರು

ಬೇಸಿಗೆ ಶಿಬಿರಕ್ಕೆ ಸೇರುವರು ನಗರದ ಮಕ್ಕಳು
ಪ್ರಕೃತಿಯನ್ನೇ ಶಿಬಿರ ಮಾಡುವರು ಹಳ್ಳಿಯ ಹೈಕಳು

ಕುಂಟಾಪಿಲ್ಲೆ, ಕಬಡ್ಡಿ, ಕೊ ಕೋ, ಮರಕೋತಿ, ಬುಗುರಿ
ಗೋಲಿ, ಕ್ರಿಕೆಟ್ಟು, ಚಿನ್ನಿದಾಂಡು, ಚೌಕಬಾರಾ, ಲಗೋರಿ

ಚಿತ್ರ, ಸೈಕಲ್, ಈಜು ಕಲಿಯಲು ಒಳ್ಳೆಯ ಅವಕಾಶ
ಎಲ್ಲಾ ಕಲಿತು ನಲಿಯುವರು, ಗಳಿಸಿ ಆಸೆಯಲ್ಲಿ ಯಶ

ಈ ದಿನಗಳು ಬರುವುದಿಲ್ಲ ಮುಂದೆ ದೊಡ್ಡವರಾದಾಗ
ಕಲಿತು, ಕುಣಿದು ಕುಪ್ಪಳಿಸಿ ನೀವುಗಳು ಚಿಕ್ಕವರಿದ್ದಾಗ

- ತೇಜಸ್ವಿ .ಎ. ಸಿ

ಹೀಗೆ ಆಗಿದ್ದಿದ್ದರೆ

on Thursday, April 15, 2010

ಹೀಗೆ ಆಗಿದ್ದಿದ್ದರೆ

ಮನಸು ಗರಿಗೆದರಿತು ಆಕೆಯ
ನೋಡಿ

ಆಗಬೇಕನಿಸಿತು ನಾವಿಬ್ಬರು
ಜೋಡಿ

ಮಾತಾಡಿಸಿ, ನಗಿಸಿ ಮಾಡಿದೆ
ಮೋಡಿ

ನಂತರ ಪ್ರೇಮದ ಸಿಗ್ನಲ್ ಕೊಟ್ಟೆ
ನೋಡಿ

ಮೊದಲು ನಂಬಲಿಲ್ಲ ಪರೀಕ್ಷಿಸಿದಳು
ನಾಟಕವಾಡಿ

ನಿಧಾನವಾಗಿ ತೆಕ್ಕೆಗೆ ಬಿದ್ದಳು ಮನಸು
ಮಾಡಿ

ಕುಣಿದೆವು ಕೆಲ ದಿನ ಬಾನಂಗಳದಿ
ಹಾರಾಡಿ

ಸಿಕ್ಕಿ ಬಿದ್ದೆವು ಮನೆಯಲ್ಲಿ, ಎಲ್ಲೆಡೆ
ತಿರುಗಾಡಿ

ಮದುವೆಗೆ ಒಪ್ಪಿಸಿದೆವು ಮನೆಯಲ್ಲಿ
ಹೋರಾಡಿ

ಈಗ ಉಂಟು ಮಕ್ಕಳೆರಡು ಅಂಗಳದಿ
ಆಟವಾಡಿ

- ತೇಜಸ್ವಿ .ಎ.ಸಿ

ಯಾರಿವನು ಸಿಂಹ

on Friday, April 9, 2010

ಯಾರಿವನು ಸಿಂಹ

ನೆನೆಪಿದೆ ನನಗೆ ಆ ನಸುಗೆಂಪು ಸಂಜೆ
ಅಂದು ಇತ್ತು ನನಗೆ ಭಾನುವಾರದ ರಜೆ

ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ
ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ

ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ
ಅವನನ್ನು ಹೊತ್ತು ತರಲು ಪೆಟ್ಟಿಗೆಯಲ್ಲಿ ಮಾಡಿದ್ದೆ ರಂದ್ರ

ಆ ಪುಟ್ಟ ಶ್ವಾನಕೆ ಅವರು ಹಾಕಿದ್ದರು ಆನೆಯ ಸರಪಳಿ
ಆ ಕುನ್ನಿಯು ಬಂದಿತು ಮನೆಗೆ ಆಗಿ ಪುಟ್ಟ ಬಳುವಳಿ

ಪುಟ್ಟ ಕುನ್ನಿಯ ತುಂಟಾಟ ಅಂದು ಗಳಿಸಿತ್ತು ಎಲ್ಲರ ಪ್ರೀತಿ
ಅವನು ಮಾಡುತ್ತಿದ್ದ ನಾಯಿಗಳ ಬೇಟೆ ಪಡೆದಿತ್ತು ಮನೆಯಲ್ಲಿ ಖ್ಯಾತಿ

ಶಾಲೆಗೆ ಹೋಗುವ ಮಕ್ಕಳನ್ನು ಹೆದರಿಸುತ್ತಿದ್ದ ಬೊಗಳಿ
ಕುಣಿದು ಬೊಗಳಿ ಕೆಸರು ಮಾಡುತ್ತಿದ್ದ ನಮ್ಮ ಮನೆಯ ಜಗುಲಿ

ವಾಕಿಂಗ್ ಎಂದು ಹೋಗುವಾಗ ಮುಖದಲ್ಲಿರಿತ್ತಿತ್ತು ಸಿಂಹದ ಠೀವಿ
ರಸ್ತೆಯ ಹಂದಿ, ನಾಯಿಗಳಿಗೆ ಸದಾ ಆಗಿರುತ್ತಿದ್ದ ಬೇಟೆಯ ಕೋವಿ

ನಮ್ಮ ಮನೆಯ 'ನಂದು'ವನ್ನು ಸಾಕಿದ್ದೇವೆ ಸಿಂಹದ ಧಾಟಿ
ಎಂದೂ ಕಳ್ಳರನ್ನು ಬಿಡಲಿಲ್ಲ ಅದು ಹೋಗಲು ತನ್ನನು ದಾಟಿ

- ತೇಜಸ್ವಿ .ಎ.ಸಿ

ಬಿದ್ದ ಅವನು ಜಾರಿ

on Thursday, April 1, 2010

  ಬಿದ್ದ ಅವನು ಜಾರಿ

  ಪ್ರೇಮ ನಿವೇದಿಸಬೇಕೆಂದ
  ಸೂರಿ

  ಬೀಳ ಬೇಡ ಎಂದೇ
  ಜಾರಿ

  ಆದರೂ ಬಿಡದೆ ನಡೆಸಿದ
  ತಯಾರಿ

  ಹೇಳಲು ಮುಂದೆ ನಿಂತ
  ಈ ಬಾರಿ

  ಮುಂದೆ ನಿಂತು ಆದನಾತ
  ಗಾಬರಿ

  ಅವಳು ತೋರಿದಳು ಅಸಡ್ಡೆಯ
  ಮಾರಿ

  ಕಾಣದಾಯಿತು ಅವನಿಗೆ ಯಾವ
  ದಾರಿ

  ಬೆಪ್ಪ ಹೇಳಿದ ನೀನೆ ಎನ್ನ
  ಸೋದರಿ

  - ತೇಜಸ್ವಿ .ಎ .ಸಿ