ಕೃಷಿಕನಾಗುವೆ

on Wednesday, October 27, 2010

ಕೃಷಿಕನಾಗುವೆ


ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ
ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ
ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ,
ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ

ವರುಷಗಳ ನಂತರ ಸಿಕ್ಕ ಅವಕಾಶಕೆ ನಾ ನಡೆದೆ
ತೋಟದ ಒಳಗೆ, ಹಿಂದೆಯೇ ಇದ್ದ ಹಸಿರು ಗದ್ದೆಯು
ಮೈದುಂಬಿ ನಿಂತಿತ್ತು, ತನ್ನ ಬಳಿ ಇದ್ದ ಜಲ ಸಂಪತ್ತ
ತೋರುತ, ತನ್ನ ಶ್ರೀಮಂತಿಕೆಯ ಜೊತೆ ಬೀಗುತ

ಹಾಗೆಯೇ ಕಾಲ ಸವೆಸುತ ಸ್ವಲ್ಪ ಮುನ್ನಡೆದರೆ
ಕಂಡಿತೆನಗೆ ಘಮ ಘಮಿಸುವ ಏಲಕ್ಕಿಯ ಗಿಡಗಳು
ಸುತ್ತಲೂ ಇದ್ದ ಎತ್ತರದ ಅಡಕೆಯ ಮರಗಳ ಮಧ್ಯೆ
ತಾನು ಕಾಣದೆ ಮೆಣಸಿನ ಹಿಂದೆ ಬಚ್ಚಿಟ್ಟು ಕೊಂಡಿತ್ತು

ತೋಟದ ಪಕ್ಕದಲ್ಲೇ ಇದ್ದ ಕೊಡಗಿನ ಕಿತ್ತಳೆ ಹಣ್ಣು
ನನ್ನ ಕೃಷಿಯ ತಿಳುವಳಿಕೆಗೆ ಪುಟ್ಟ ಸವಾಲಾಯಿತು
ಪಕ್ಕದಲ್ಲೇ ಗುಡ್ಡದ ಮೇಲೆ ಇದ್ದ ಕಾಫಿ ಬೆಳೆ, ಒಂದೇ
ಕಡೆ ಕಂಡ ವೈವಿಧ್ಯ ಬೆಳೆ ನನ್ನನ್ನು ಬೆರಗುಗೊಳಿಸಿತು

ಸುಂದರ ಪ್ರಕೃತಿಯ ನಡುವೆ ಕಂಡ ಹತ್ತು ಹಲವು
ಬಗೆಯ ಕೃಷಿ ತಂದುಕೊಟ್ಟಿತು ಎಲ್ಲರಿಗೂ ಉತ್ಸಾಹ
ನಾವೂ ಮುಂದೆ ನಗರವ ತೊರೆದು, ಪ್ರಕೃತಿ ಸಹಜ
ಕೃಷಿಯಲಿ ತೊಡಗಿ ವ್ಯವಸಾಯ ಮಾಡುವ ಪ್ರೋತ್ಸಾಹ

- ತೇಜಸ್ವಿ.ಎ.ಸಿ

2 comments:

ಮಹೇಶ ಭಟ್ಟ said...

ಸುಂದರ ಸಾಲುಗಳು . ರಮ್ಯವಾದ ಕವಿತೆ.ಆದರೆ ಕೃಷಿಯೆಂಬುದು ತೀರಾ ನಿರ್ಲಕ್ಷಿತ ಕ್ಷೇತ್ರ

Tejaswi.A.C said...

ಧನ್ಯವಾದಗಳು ಮಹೇಶ್. ಮನುಷ್ಯನ ಮೂಲ ಭೂತ ಅಗತ್ಯವಾಗಿರುವ ಕೃಷಿ ಅಲಕ್ಷಿತವಾಗಬಾರದು ಮಹೇಶ್.ಧನ್ಯವಾದಗಳು.

Post a Comment