Tuesday, February 9, 2010

ವಾಸ್ತವವ ಅರಿ ಮನವೆ

ವಾಸ್ತವವ ಅರಿ ಮನವೆ

ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ
ಭೌತಿಕ ಜಗದಲಿರುವ ಸರಳ ಹಸಿ ಸತ್ಯವ

ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ
ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ?

ಸೃಷ್ಟಿಸುವೆ ನಿತ್ಯ ನೀ ನೂರು ಹೊಸ ಲೋಕವ
ನೂರು ಲೋಕದಲಿ ನೀಡುವೆ ವಿಭಿನ್ನ ಅನುಭವ

ಭವಿಷ್ಯದ ಬಗ್ಗೆ ಸೃಷ್ಟಿಸುವೆ ಅನಗತ್ಯ ಆತಂಕವ
ಕೋಟಿ ಯೋಚನೆಗಳಲಿ ಆಗುವುದೆಷ್ಟು ವಾಸ್ತವ?

ಲಕ್ಷ ಮಾತುಗಳು ಸೃಷ್ಟಿಸುವವು ಬರೀ ಹಗಲು ಗನಸು
ಆದರೆ ನಾಲ್ಕೇ ಮಾತು ಮಾಡುವವು ಕನಸನ್ನು ನನಸು

ಅನಗತ್ಯ ಸುದ್ದಿಯಲಿ ಮುಳುಗಿ ಮಾಡುವೆ ಬೇಡದ ವ್ಯಥೆ
ನಿನ್ನ ಜೀವನಕ್ಕೆ ಪರಿಣಮಿಸದ ವಿಷಯಕ್ಕೆ ನಿನಗೇಕೆ ಚಿಂತೆ?

ಅರಿ ನಿಜವ, ತೊರಿ ಭ್ರಮೆಯ, ಗಳಿಸು ನೆಮ್ಮದಿಯ
ನಡೆಸು ಜೀವನವ, ಅರಸಿ ಭೌತಿಕ ವಾಸ್ತವಿಕತೆಯ

- ತೇಜಸ್ವಿ .ಎ.ಸಿ

No comments:

Post a Comment