Monday, February 1, 2010

ನನ್ನ ವಿದೇಶ ಪ್ರವಾಸ

ನನ್ನ ವಿದೇಶ ಪ್ರವಾಸ

ದೊರಕ್ಕಿತ್ತು ಒಂದು ಅವಕಾಶವು ನನಗೆ
ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ

ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ
ನಡೆಸಿದೆ ಹೊರಡಲು ಭರ್ಜರಿ ತಯಾರಿ

ಸಿದ್ದವಾಯಿತು ನನ್ನ ವೀಸ ಪಾಸ್ ಪೋರ್ಟು
ಆಗಸಕ್ಕೆ ಹಾರಿದೆ ನಾ ಬಿಟ್ಟು ಏರ್ ಪೋರ್ಟು

ಕಂಡು ನಾ ಬೆರಗಾದೆ ಯೂರೋಪಿನ ಸೌಂದರ್ಯ
ಇಡೀ ಭೂಮಿ ಹೊದ್ದಿತ್ತು ಹಸಿರು ರತ್ನ ಗಂಬಳಿಯ

ಇತಿ ಮಿತಿ ಜನಸಂಖ್ಯೆಯ ಆ ಪುಟ್ಟ ದೇಶ
ಸುಖ ಸವಲತ್ತು ಹೊಂದಿದ ಶ್ರೀಮಂತ ದೇಶ

ವಿಶ್ವ ಮಾತಾಡುವ ಆಂಗ್ಲ ಅವರ ಮಾತೃ ಭಾಷೆ
ಶಾಲೆ ಕಲಿಸುವ ಮಾಧ್ಯಮ ಅವರ ಆಡು ಭಾಷೆ

ಜನ ಹಂಬಲಿಸಿ ಹುಡುಕುವ ಬಿಳಿ ಚರ್ಮ ಅವರದ್ದು
ಜನ ಬಯಸುವ ಶುಭ್ರ ಹವೆ, ಹಸಿರು ನೆಲ ಅವರದ್ದು

ಜನ ಆಶಿಸುವ ನೀಳ, ಧೃಡ ಕಾಯ ಅವರದ್ದು
ನೀಲ ಕಂಗಳ, ಲಕ್ಷಣ ಮುಖಚರ್ಯೆ ಅವರದ್ದು

ವಿಶ್ವವನ್ನು ಸುಲಭವಾಗಿ ಸುತ್ತಬಲ್ಲ ಆರ್ಥಿಕತೆ ಅವರದ್ದು
ಸುಖವಾಗಿ ಸುತ್ತಾಡಲು ಬಯಸುವ ಕಾರು ಅವರೆಲ್ಲರದ್ದು

ವಿಶ್ವದೆಲ್ಲೆಡೆ ಸಿಗುತ್ತದೆ ಅವರಿಗೆ ಗೌರವ, ಮಾನ್ಯತೆ
ನೆನೆದೇ ನಾನು ನಮ್ಮಗಳ ಜೀವನದ ಸಾಮಾನ್ಯತೆ

ಮೂರು ಶತಮಾನ ಆಳಿ ಹೊತ್ತು ಹೋದರು ನಮ್ಮ ಸಂಪತ್ತು
ಮೂರೇ ತಿಂಗಳಲ್ಲಿ ಅವರ ಕೆಲಸಗಳಿಗೆ ನಾವು ಕೊಟ್ಟೆವು ಆಪತ್ತು

ಏನಾದರು ಆಗಲಿ ಸುಂದರವಾಗಿತ್ತು ನನ್ನ ಅನುಭವ
ಇಂಥಹ ಪ್ರವಾಸ ತೀರಿಸಿವುದು ದೇಶದ ಹಣದ ಅಭಾವ

- ತೇಜಸ್ವಿ.ಎ.ಸಿ

No comments:

Post a Comment