ವನ ಮಹೋತ್ಸವ

on Friday, December 31, 2010

ವನ ಮಹೋತ್ಸವ


ಶಾಲೆಯಲ್ಲಿ ಮಾಡಿದೆವು ವನ ಮಹೋತ್ಸವ
ಸಸಿಯ ನೆಡಲು ನಮಗೆ ಕೊಟ್ಟಿತು ಉತ್ಸಾಹ

ಅಂದು ಶಾಲೆಯಲಿ ಇತ್ತು ಪುಟ್ಟ ಸಮಾರಂಭ
ನಂತರ ಮಾಡಿದೆವು ಗಿಡ ನೆಡಲು ಆರಂಭ

ಪುಟ್ಟ ಸಲಾಖೆಯ ಹೊತ್ತು ತಂದೆವು ನಾವು
ಕೆತ್ತಿ ಆವರಣದಲಿ ಚಿಕ್ಕ ಪಾತಿಯ ಮಾಡಿದೆವು

ಬಗೆ ಬಗೆಯ ಸಸಿ ನೆಟ್ಟು ಅದಕ್ಕೆ ನೀರೆರೆದೆವು
ಆ ಸಸಿಗಳಿಗೆ ಗೊಬ್ಬರ ನೀಡಿ ಪೋಷಿಸಿದೆವು

ಪುಟ್ಟ ಸಸಿಗಳ ತೋಟವಾಯ್ತು ಶಾಲೆ ಅಂಗಳ
ಮುಂದಿನ ಪೀಳಿಗೆಗೆ ಹಾಡುವುದಿದು ಮಂಗಳ

ಪ್ರತಿ ವರ್ಷ ಆಚರಿಸುವೆವು ವನ ಮಹೋತ್ಸವ
ಹಸಿರು ಹೆಚ್ಚಿಸಲು ಕೊಡುವೆವು ಪ್ರೋತ್ಸಾಹ

- ತೇಜಸ್ವಿ.ಎ.ಸಿ

2 comments:

ವಸಂತ್ said...

ನಮಸ್ತೆ ತೇಜಸ್ವಿರವರೆ ನೀವು ಸಂಪದದಲ್ಲಿ ಬರೆಯುವುದನ್ನು ನೋಡಿದ್ದೆ ತುಂಬಾ ಚೆನ್ನಾಗಿರುತ್ತವೆ ನಿಮ್ಮ ಬರಹಗಳು ನಿಮ್ಮ ವನ ಮಹೋತ್ಸವ ಕವನವು ತುಂಬಾ ಚೆನ್ನಾಗಿದೆ ಧನ್ಯವಾದಗಳು....

ವಸಂತ್

Tejaswi.A.C said...

ಧನ್ಯವಾದಗಳು ವಸಂತ್.

Post a Comment