ಕಾವ್ಯಾನುರಕ್ತ

on Tuesday, March 13, 2012

ಕಾವ್ಯಾನುರಕ್ತ 

ಜೀವನದ ಸಣ್ಣ ಎಳೆಗಳರಸಿ ಕವನ ರಚಿಸುವಾಸೆ
ನಗಣ್ಯ ಪ್ರಸಂಗದೊಳು ಕಾವ್ಯವನು ಅರಸುವಾಸೆ 
ಜನರ ಮೊಗದ ಅಭಿವ್ಯಕ್ತಿಯ ಕಾವ್ಯದೊಳು ಮೀಯುವಾಸೆ
ತಂಗಾಳಿಯ ತಂಪೊಳಗಿನ ಕಾವ್ಯವ ಅನುಭವಿಸುವಾಸೆ
ಎಲೆ ಉದುರಿ ಬೋಡಾದ ಮರದೊಳು ಕಾವ್ಯ ಹುಡುಕುವಾಸೆ
ಹಣ್ಣಾದ ಮುಪ್ಪಿನ ಸುಕ್ಕಲೂ ಕಾವ್ಯವ ಕಾಣುವಾಸೆ
ಸಣ್ಣ ಹನಿಗಳ ಮಳೆಯ ಕಾವ್ಯದಲಿ ನೆನೆಯುವಾಸೆ
ಕೆರೆಯ ದಡದ ನೀರ ತೆರೆಯಲಿ ಕಾವ್ಯ ಕೇಳುವಾಸೆ
ಎಳೆಯ ಮೊಗದ ತುಟಿಯಲಿ ಕವನ ಅನುಭವಸಿವಾಸೆ
ಮೊದಲ ಮಳೆಯ ಘಮಿಸುವ ಮಣ್ಣಲೂ ಕವನ ರಚಿಸುವಾಸೆ

- ತೇಜಸ್ವಿ.ಎ.ಸಿ 

2 comments:

Swarna said...

May your dream come true.

Tejaswi said...

Thank you Swarna, ನಿಮ್ ಬ್ಲಾಗಿಗೆ ಭೇಟಿ ನೀಡಿದೆ ತುಂಬಾ ಚೆನ್ನಾಗಿ ಬರೀತಿರ ಅದೂ ಸಾಕಷ್ಟು ವರ್ಷಗಳಿಂದ.

Post a Comment